
Here is the Three
Ugabhogas(100 sulaadhi=1 ugabhoga)
which are given upadesha to Kallur Kristappa
by Modalakalu Sheshadasaru to get through from obstacles.
So,do chant and get
through from your difficulties .
ಉಗಾಭೋಗ-೧
ಭಕ್ತವತ್ಸಲನೆಂಬ
ಬಿರುದುಳ್ಳದೇವ ನಿನ್ನ| ಭಕುತಿಯಿಂದಲಿ ನಮಿಸಿ
ಬಿನ್ನೈಸುವೆ||
ರಿಕತನ
ಬಿನ್ನಪವ ಮನಕೆ ತಂದುವೇಗ ಆ|ಸಕುತಿಯಿಂದಲಿ ಸಫಲಮಾಡೊ|
ಭಕುತನಾದ
ಇವಗೆ ಲೌಕಿಕದಿಂದ ಬಂದ | ವಿಕಟರೂಪವಾದ ದುರಿತದಿಂದ |
ಮುಕುತನ್ನ
ಮಾಡುವದು ಕರುಣದಿಂದಲಿ ವೇಗ |ಶಕಟಭಂಜನ ಶ್ರೀಕೃಷ್ಣ |
ವುತ್ ಕೃಷ್ಟನು ನೀಮುಕುತಿದಾಯಕ |ಗುರುವಿಜಯವಿಠ್ಠಲ|
ಮದ್ಭಕ್ತನ
ಪ್ರಣಶ್ಯತಿ ಎಂಬೋದು ಸತ್ಯಮಾಡು||
ಉಗಾಭೋಗ-೨
ಭಕ್ತರ
ಮನೋರಥ ಪೂರ್ಣಮಾಡುವಲ್ಲಿ| ಉಕ್ತವಾದ ಕಾಮಧೇನು ಎನಿಪೆ |
ಭಕ್ತರ
ಅಪರಾಧ ಸಹನ ಮಾಡುವರಲ್ಲಿ ದಾರಿತ್ರಿಯೊಳಗೆ
ಸಮಾನ
ನೆನಿಪೆ ಸಾರ್ವ ಭೌಮ |
ಭಕ್ತರ
ಮ್ಯಾಲೀ ಮಹ ಕrrರುಣ ಮಾಡುವಲ್ಲಿ ಪಿತೃ ಮಾತೃ ಗುರು ಭ್ರಾತೃ ಸಮಾನ ನೆನಿಪೆ|
ಭಕ್ತರ
ಅಭಿಮಾನ ಸಹನೆ ಮಾಡುವಲ್ಲಿ|ಮಿತ್ರನೆನಿಸಿಕೊಂಬೊ ಅನಿಮಿತ್ತ ಬಂಧು|
ಭಕ್ತರ
ದುರಿತ ಕಳೆದು ಕಾವ ವಿಷಯದಲ್ಲಿ| ಛತ್ರನೆನಿಪೆ ಸತತ ಸನ್ಮಂಗಳಾಂಗ |
ಭಕ್ತರ
ನಿಂದಕರ ನಿಗ್ರಹಮಾಡುವಲ್ಲಿ ಮೃತ್ಯ ಯಮ ಸದೃಶ್ಯನೆನಿಪ ದೇವ|
ಭೃತ್ಯವತ್ಸಲ
ಗುರುವಿಜಯವಿಠ್ಠಲರೇಯ |
ಭಕ್ತರ ಪೂರೆವ ಬಿರಿದು ನಿನ್ನದಯ್ಯಾ||
ಉಗಾಭೋಗ-೩
ಶತೃಮಿತ್ರಗಳಲ್ಲಿ
ಸಮಸ್ಥಿತನಾಗಿ ನೀನೆ| ಪ್ರಕೃತಿ ಜೀವಕಾಲ ಅನುಸರಿಸೀ |
ಕೃತ್ಯವಗಳ
ಮಾಳ್ಪವವನಾಗಿ ಜೀವರ್ಗೆ ಸುಖದುಃಖ | ಮೊತ್ತಗಳುಣಿಸುವಿ ನಿಯಮದಂತೆ|
ಕರ್ತೃನೆಂದು
ನಿನ್ನ ನೆರೆನಂಬಿ ಇಪ್ಪವಂಗೆ
ದುಷ್ಕೃತ್ಯಗಳಿಲ್ಲವೆಂದು ಶಾಸ್ತ್ರಸಿದ್ಧ|
ಚಿತ್ತಕ್ಕೆ
ತಂದು ವೇಗ | ಶತೃ ಸಹಸವನ್ನು | ವ್ಯರ್ಥಮಾಡಿ ಭಕ್ತನಾದವನ |
ಹತ್ತಲಿ
ಕರೆದು ದಯದೃಷ್ಟಿಯಿಂದಲಿ ನೋಡಿ | ಉತ್ತಮವಾದ ಸುಖವೈದಿಪದೂ|
ಭಕ್ತವತ್ಸಲ
ಗುರುವಿಜಯವಿಠ್ಠಲರೇಯ |
ಎತ್ತಲಿದ್ದರು ನಿನ್ನ ಪೊಂದಿದವನು
Shree Krishnarpanamaastu