ನಿರುತ ಕಾಯೋ ಸುಶಮೀಂದ್ರ ಸುಮುನಿರಾಯ
ಸುಜಯೀಂದ್ರರ ತನಯ.
ಸಿರಿಗುರುರಾಜರ ಪರಮ ಕರುಣೆಯಿಂದಾ
ಕರಮೆರೆವ ಮುನೀಂದ್ರ.
ಧರೆಯೊಳು ವರ ತುಂಗಾನದಿಯ ತಟದಿ
ಮೆರೆಮೆರೆಯುವ ಮಠದಿ,
ಹರಿ ಶ್ರೀ ರಾಮನ ನಿರುತ ಪೂಜೆಯಲ್ಲಿ
ಪರಿಪರಿ ವಿಧದಲ್ಲಿ,
ಸಾರಿ ನಮಿಪರಿಗೆ ಹರಕೆಯ ದಯದಿಂದ
ಹಾರೈಪ ಮುನೀಂದ್ರ.
ಅನ್ನ - ಜ್ಞಾನ ದಾಸೋಹವ ನಡೆಸುತಲಿ
ಘನ ಕರುಣೆಯಲ್ಲಿ,
ದಿನ ದಿನಕೆ ಘನ ಛತ್ರವ ನಿರಮಿಸುತ
ಗುರು ಪ್ರೀತಿಗೆ ಎನುತ,
ಮನಕಾನಂದವ ನೀವ ಸುಸ್ಥಳದಲ್ಲಿ
ಮಂತ್ರಾಲಯದಲ್ಲಿ.
ನೇಮ ನಿತ್ಯಗಳ ಅರಿಯದವನು ನಾನು
ಬಂದೆನು ಸುರಧೇನು,
ಸ್ವಾಮಿ ಅನುಗ್ರಹ ಅರಿಯದೆ ತಿರುಗುವನು
ಪಾಪಿಷ್ಠನಲ್ಲೇನು?
ನೇಮದಿ ನರಹರಿ ಧ್ಯಾನಿಪ ಬಗೆ ತಿಳಿಸಿ
ಅನುರಾಗದಿ ಹರೆಸಿ.
Comments
Author of this Devaranama
Namaskara,
This is Pavan V Acharya. I am writing a book on "Sri Sushameendraru", I request the Author of this Devaranama to permit me to use it in my book.
Please contact me on pavanv2011@gmail.com
Good One
Namskar,
Really nice to read.