ತಂದೆ ಶ್ರೀ ಸುಶಮೀಂದ್ರ ಸಲುಹಿದ
ಬಂದು ನನ್ನಯ ಪಾಲಿಗೆ,
ಇವರ ಕರುಣೆಯ ಕವಚ ಧರಿಸುತ
ಧನ್ಯವಾಯ್ತೆನ್ನ ಪೀಳಿಗೆ.
ಮಂತ್ರ ಸದನದಿ ನಿಂತು ನಿರುತದಿ
ಕಂತುಪಿತನನು ಸ್ಮರಿಸುವ,
ಭವದ ರೋಗದಿ ತೊಳಲಿ ಬಳಲಿ
ಬರುವ ಭಕುತರ ಹರೆಸುವ.
ಮೂಲರಾಮರ ಕರುಣೆ ಬಲದಲಿ
ಅನ್ನ- ಜ್ಞಾನವ ನೀಡುವ,
ಭಕುತ ಹೃದಯದ ಹಸಿವ ನೀಗುತ
ಮಂದಹಾಸದಿ ನೋಡುವ.
ರಾಘವೇಂದ್ರರ ಪ್ರೀಯ ನಾಮವ
ನಿತ್ಯ ಪಠಿಸೆಲೊ ಎನ್ನುವ,
ಅವರ ಧ್ಯಾನದಿ ನೀಡಿ ಅಕ್ಷತೆ
ಕಳೆಯುವ ತಾ ಬನ್ನವ
ಜನುಮ ಜನುಮದಿ ನಿನ್ನ ಕರುಣೆಯ
ನನ್ನಲಿರಿಸೈ ಮುನಿವರ,
ಹರಿಯ ಸ್ಮರಣೆಗೆ ವಿಮುಖನಾಗದೆ
ಇರುವೊಲೀಯೈ ಹಿರಿವರ.
ನಿನ್ನ ಅಡಿಗಳ ಬಿಡೆನು ಎಂದಿಗೂ
ನನ್ನ ನೀ ಕೈ ಬಿಡದಿರು,
ಘನ್ನವಹ ನರಹರಿಯ ನುತಿಸುತ
ನನ್ನ ಹೃದಯದಿ ನೆಲೆಸಿರು.
Comments
PANCHANGA
NAMASKARA KINDLY LET ME KNOW WHETHER YOU CAN SEND THE PANCHANGA BY POST IF YES LET ME KNOW THROUGH MY EMAIL I WILL GIVE MY ADDRESS YHANGS SIR